Saturday 15 July 2023

 

ಶಿವಾಚಾರವೆಂಬ ಭಟ್ಟ ಬಯಲ:

ಪರಧನ, ಪರಸತಿ, ಮಾಂಸಾಹಾರ, ಮದ್ಯಪಾನ, ಇವುಗಳಿಂದ ದೂರವಿರುವವನಿಗೆ; ಸುಳ್ಳು ಹೇಳದ,

ಕಳವು ಮಾಡದ, ಕೊಲೆ ಮಾಡದ, ಭವಿಗಳ ಸಂಗಮಾಡದ, ಪ್ರಾಣಿಹಿಂಸೆ ಮಾಡದ ಹಾಗೂ ಜಾತಿ

ಭೇದವೆಣಿಸದ, ಲಿಂಗಭೇದವೆಣಿಸದ, ಮಾತಿನಲ್ಲಿ ಕಪಟವಿಲ್ಲದ - ಈ ವ್ರತವನ್ನು ಆಚರಿಸುವಲ್ಲಿ

- ಇನ್ನೇನು ಎಲ್ಲವು ಇದೆ. ಶಿವನ ವಾಸ ಇಲ್ಲಿಯೇ ಇದೆ. ಭಾವ ಶುದ್ಧಿ ಇಲ್ಲದೆ, ಅಂತರಂಗ ಶುದ್ಧಿಯಾಗದು.

ತನು ಶುದ್ಧ, ಮನ ಶುದ್ಧ, ನಡೆ ಶುದ್ಧ, ನುಡಿಶುದ್ಧವಾಗಬೇಕು. ಕರ್ಮ-ಮಾರ್ಗಕ್ಕಿಂತ, ಭಕ್ತಿ-ಮಾರ್ಗ

ಶ್ರೇಷ್ಟವಾದದ್ದು. ಜಾತಿಭೇದ ತರವಲ್ಲ. ಇದು ಕೇವಲ ಮಾನವ ಕಲ್ಪಿತ. ಪರಮಾತ್ಮನ ನೆಲೆ ಆತ್ಮದಲ್ಲಿ.

ಮನ, ವಚನ, ಕಾಯ ಒಂದಾಗದಿದ್ದರೆ,

ಕೂಡಲ ಸಂಗೈಯ್ಯ ನೆಂತೊಲಿವನಯ್ಯಾ? ಇತರರಿಗೆ ಯಾವುದೇ ರೀತಿಯ ಕೇಡೆಣಿಸಬಾರದು,

ಇದೇ ಶಿವಪೂಜೆ. ಅಳುಪಿ ಭವಿಯೊಡನುಂಡರೆ, ಅವ ಭಕ್ತನಲ್ಲ. ಭವಿಯ ಮುಟ್ಟಲಾಗದು. ವಿಪ್ರರು,

ನುಡಿದಂತೆ ನಡೆಯರು. ಅಗತ್ಯ ಬಿದ್ದಾಗ ಸೌರ್ಯ ಪ್ರದರ್ಶನ ಮಾಡಲೇ ಬೇಕು. ಅಂತರಂಗದಲ್ಲಿ

ಅರಿವಾಗದೇ, ಬಹಿರಂಗದಲ್ಲಿ ಆಚರಣೆ ಗೈದು ಫಲವಿಲ್ಲ. ಶರೀರವೇ ದೇವಾಲಯಮಯ ವಾಗಬೇಕು.

ಒಳಗೂ ಹೊರಗೂ ಪಾರದರ್ಶಕದಂತೆ ಆಗಬೇಕು, ಈ ಶರೀರವೆಂಬ ಗುಡಿ.

----------------------------

ಪರಬ್ರಹ್ಮ್ ಎಂಬ ಈಶ್ವರ:

ಭೂಗೋಳ. ಜಲಗೋಳ, ವಾಯುಗೋಳ, ಚಂದ್ರಗೋಳ, ಸೂರ್ಯಗೋಳ, ಆಕಾಶಗೋಳ, ಅನಂತ

ನಕ್ಷೆತ್ರಗೋಳ, ಇವೆಲ್ಲವುಗಳನ್ನು ಸೇರಿದ ಈ ಕಾರಣಪುರುಷನೇ ಬ್ರಹ್ಮ, ಅಥವಾ ಲಿಂಗ.

ವಿಸ್ತಾರವಾದ ಮತ್ತು ಮಿದುಳಿಗೆ ನಿಲುಕದ ಸಂಗತಿ, ಈ ಇರುವಿಕೆ. ಇದೇ ಈ ಇರುವಿಕೆಯೇ ಸತ್, ಇದರ ಹಿಂದಿನ ತತ್ವ, ಅಗೋಚರ ನಿಯಮ, ಅದೇ ತತ್. ಅಂದರೆ ಈ ವಿಶ್ವವು ತತ್ -ಸತ್ ಗಳಿಂದ ಆಗಿದೆ. ಇದಕ್ಕೆ ಕಾರಣೀಭೂತವಾದ ತತ್ವವೇ ಶಿವನು ಅಥವಾ ಪರಬ್ರಹ್ಮ.

"ಜಗದಗಲ, ಮುಗಿಲಗಲ, ಮಿಗೆಯಗಲ, ನಿಮ್ಮಗಲ; ಪಾತಾಳದಿಂದತ್ತ ನಿಮ್ಮ ಶ್ರೀಪಾದ; ಆಕಾಶ

ದಿಂದತ್ತತ್ತ ನಿಮ್ಮ ಶ್ರೀ ಮುಕುಟ." ಅಂತ ಶರಣರುಈಶ್ವರನನ್ನು ಹಾಡಿ ಹೊಗಳಿದ್ದಾರೆ.

ಸಸ್ಯ ಮತ್ತು ಪ್ರಾಣಿಗಳೆಂಬ [ಜೀವಗೋಳದಿ] ಚರಾಚರದಿಂದ ಕೂಡಿದೆ ಈ ಭೂಮಿ. ಸಸ್ಯ ಹಾಗು

ಪ್ರಾಣಿಗಳು [ಜೀವಿಗಳು] ಇಲ್ಲಿಯೇ ಹುಟ್ಟಿ, ಬೆಳೆದು, ಇಲ್ಲಿಯೇ ಲಯವಾಗುತ್ತವೆ. ಅಂದರೆ, ಸ್ವರ್ಗವಾಗಲಿ,

ನರಕವಾಗಲಿ, ಇದೆಲ್ಲವೂ, ಇಲ್ಲಿಯೇ, ಈಗಲೇ ಇದೆ. ಆಮೇಲೆ ಎಲ್ಲವೂ ಲಯವಾಗುತ್ತೆ. ಉಳಿದವರಿಗೆ

ಅಲ್ಪ-ಸ್ವಲ್ಪ ದಿನಗಳ ನೆನಪು. ಆಮೇಲೆ ಏನು? ಎಲ್ಲವೂ ಶೂನ್ಯ.

---------------------------


ದೃತಿಗೆಟ್ಟು ಅನ್ಯರ ಬೇಡದಂತೆ,

ಮತಿಗೆಟ್ಟು ಪರರ ಹೊಗಳದಂತೆ,

ಪರಸತಿಯರ ರತಿಗೆ ಮನ ಹಾರದಂತೆ,

ಶಿವಪಥವಲ್ಲದವ ರೊಡನಾಡದಂತೆ,

ಅನ್ಯಜಾತಿಯ ಸಂಗವ ಮಾಡದಂತೆ,

ಎನ್ನ ಪ್ರತಿಪಾಲಿಸು ಕೂಡಲ ಸಂಗಮದೇವ.


ಕಂಡಭಕ್ತರಿಗೆ ಕೈ ಮುಗಿವಾತನೇ ಭಕ್ತ.

ಮೃದುವಚನವೇ ಸಕಲ ಜಪಂಗಳಯ್ಯಾ.

ಮೃದುವಚನವೇ ಸಕಲ ತಪಂಗಳಯ್ಯಾ.

ಸದುವಿನಯವೇ ಸದಾಶಿವನ ಒಲುಮೆಯಯ್ಯಾ;

ಕೂಡಲಸಂಗಯ್ಯ, ನಂತಲ್ಲದೊಲ್ಲನಯ್ಯಾ.


ಆನೆಯನೇರಿಕೊಂಡು ಹೋದಿರೇ ನೀವು,

ಕುದುರೆಯನೇರಿಕೊಂಡು ಹೋದಿರೇ ನೀವು,

ಕುಂಕುಮ ಕಸ್ತೂರಿಯ ಹೋಸಿಕೊಂಡು ಹೋದಿರೇ,

ಅಣ್ಣಾ, ಸತ್ಯದ ನೀಲವನರಿಯದೇ ಹೋದಿರಲ್ಲಾ,

ಸದ್ಗುಣವೆಂಬ ಫಲವ ಬಿತ್ತದೆ, ಬೆಳೆಯದೆ ಹೋದಿರಲ್ಲಾ, 

ಅಹಂಕಾರವೆಂಬ ಸದಮದಗಜವೇರಿ,

ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ,

ನಮ್ಮ ಕೂಡಲ ಸಂಗಮ ದೇವರನರಿಯದೆ,

ನರಕಕ್ಕೆ ಭಾಜನವಾದಿರಲ್ಲಾ.


ಸರಳತೆ ಎಂದರೆ ನಮ್ಮ ಅಗತ್ಯಗಳನ್ನು ಕನಿಷ್ಠ ಮಟ್ಟಕ್ಕೆ ಇರಿಸಿಕೊಳ್ಳುವುದು. ಸರಳ ಜೀವನದಿಂದ

ನಮಗೆ ಹೆಚ್ಚು ವೇಳೆ ಲಭಿಸುತ್ತದೆ. ಸರಳ ಜೀವಿಗಳು ಸುಳ್ಳು ಹೇಳಲಾರರು. ಪರಿಪೂರ್ಣ ನೈತಿಕವರ್ತನೆ

ಗಳಿಂದ ಸಮಗ್ರವಾದ ಮನೋನಿಗ್ರಹ ಸಾಧ್ಯ. ನಿಜವಾದ ನೀತಿವಂತ ಬೇರೇನು ಮಾಡಬೇಕಾಗಿಲ್ಲ.

ಮನಸ್ಸು, ಆಹಾರದಿಂದ ಆಗುವ ಕಾರಣ, ನಾವು ತಿನ್ನುವ ಆಹಾರವು ಶುದ್ಧವಾದಾಗ, ಸತ್ವ ಅಥವಾ

ಅಂತಃಕರಣವು ಶುದ್ಧವಾಗುತ್ತದೆ. ಆಹಾರವೆಂಬ ಮಾತಿಗೆ, ಇಂದ್ರಿಯಗಳ ಮೂಲಕ ನಾವು ಗ್ರಹಿಸುವ

ಶಬ್ದ, ದ್ರಶ್ಯ, ಗಂಧ ಇತ್ಯಾದಿಗಳು ಆಹಾರವೆಂದೇ ಅರ್ಥ. ಸೌಂದರ್ಯ ಹಾಗು ಯೌವ್ವನಗಳು

ಶಾಶ್ವತವಾದವುಗಳಲ್ಲ. ಇಂದು ಇದ್ದು ನಾಳೆ ಅವು ಅಳಿದು ಹೋಗುತ್ತವೆ. ಸರಿಯಾಗಿ ಬದುಕುವುದೇ

ಶ್ರೇಷ್ಠ ಜೀವನ.

ಅಂತಿಕ್ಕು ಇಂತಿಕ್ಕು ಎಂತಿಕ್ಕು ಎನಬೇಡ,

ಚಿಂತಿಸಿ, ದೇಹ ಬಡವಕ್ಕು; ಶಿವನಿರಿಶಿ

ದಂತಿಹುದೆ ಲೇಸು ಸರ್ವಜ್ಞ.


No comments:

Post a Comment