Saturday 1 January 2022

 

ದಕ್ಷಿಣ ಭಾರತದ ಚಾಲುಕ್ಯರು

ಚಾಲುಕ್ಯರು ದಕ್ಷಿಣ ಪ್ರಸ್ಥಭೂಮಿಯ ಪ್ರದೇಶವನ್ನು ೬೦೦ ವರ್ಷಗಳಷ್ಟು ದೀರ್ಘ ಕಾಲ ಆಳಿದರು. ಈ ಅವಧಿಯಲ್ಲಿ ಮೂರು, ಸ್ವತಂತ್ರ ಆದರೆ ನಿಕಟ ಸಂಬಂಧದ, ರಾಜ್ಯಗಳಾಗಿ ಮೆರೆದಿದ್ದವು. ಇವು ಬಾದಾಮಿಯ ಚಾಲುಕ್ಯರು, (ಕ್ರಿ.ಶ. ೬ - ೮ನೆಯ ಶತಮಾನ) ಮತ್ತು ಅವರದೇ ಸೋದರ ಸಾಮ್ರಾಜ್ಯಗಳಾದ ಕಲ್ಯಾಣಿಯ ( ಪಶ್ಚಿಮ) ಚಾಲುಕ್ಯರು ಮತ್ತು ವೆಂಗಿಯ (ಪೂರ್ವ) ಚಾಲುಕ್ಯರು.

ಕರ್ನಾಟಕದ ಇತಿಹಾಸದಲ್ಲಿ , ಚಾಲುಕ್ಯರ ಕಾಲವನ್ನು ಸುವರ್ಣ ಯುಗವೆಂದು ಪರಿಗಣಿಸಲಾಗಿದೆ. ರಾಜ್ಯವಿಸ್ತಾರ ಅಷ್ಟೇ ಅಲ್ಲದೆ, ಈ ಕಾಲವು ದಕ್ಷ ಆಡಳಿತ ಕ್ರಮ, ಸಾಮಾಜಿಕ ಸುರಕ್ಷತೆ, ವಿದ್ಯಾಪ್ರಸಾರ , ಇತರ ಸಾಂಸ್ಕೃತಿಕ ಚಟುವಟಿಕೆಗಳು, ವ್ಯಾಪಾರ , ವಾಣಿಜ್ಯಗಳಲ್ಲಿ ವಿಕಾಸ , ಸಾಹಿತ್ಯ, ಕಲೆಮತ್ತು ವಾಸ್ತುಶಿಲ್ಪಗಳಲ್ಲಿ ಅಭಿವೃದ್ಧಿ ಇವುಗಳನ್ನೂ ಪ್ರತಿನಿಧಿಸುತ್ತದೆ. ಈ ಕಾಲವು ಸಾಮಾಜಿಕ ಸುಧಾರಣೆಗಳಿಗೂ ಇಂಬು ಕೊಟ್ಟು ಬಸವೇಶ್ವರರಂತಹ ವಿಶಿಷ್ಟ ಸುಧಾರಕರಿಂದ ವೀರಶೈವಪಂಥದ ಹುಟ್ಟಿಗೂ ಕಾರಣವಾಯಿತು"


ಬಾದಾಮಿಯ ಚಾಲುಕ್ಯರು

ಚಾಲುಕ್ಯ ಸಾಮ್ರಾಜ್ಯವನ್ನು ಕಟ್ಟಿದವನು ಒಂದನೆಯ ಪುಲಿಕೇಶಿ (ಕ್ರಿ.ಶ. ೫೫೦). ವಾತಾಪಿ ( ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಈಗಿನ ಬಾದಾಮಿ) ಯನ್ನು ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಈ ಚಾಲುಕ್ಯರು ಮುಂದೆ ಬಾದಾಮಿಯ ಚಾಲುಕ್ಯರು ಎಂದು ಪ್ರಸಿದ್ಧರಾದರು. ಪುಲಿಕೇಶಿ ಹಾಗೂ ಆತನ ವಂಶಸ್ಥರು ಆಳಿದ ರಾಜ್ಯ ಇಂದಿನ ಸಂಪೂರ್ಣ ಕರ್ನಾಟಕ ರಾಜ್ಯ, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ಗುಜರಾತ್ ಮತ್ತು ಆಂಧ್ರ ಪ್ರದೇಶದ ಬಹುತೇಕ ಭಾಗಗಳನ್ನು ಒಳಗೊಂಡಿತ್ತು. ಇಮ್ಮಡಿ ಪುಲಿಕೇಶಿ ಬಾದಾಮಿ ಚಾಲುಕ್ಯರ ಅತಿ ದೊಡ್ಡ ಚಕ್ರವರ್ತಿ.

ಕ್ರಿ.ಶ. ೭೫೩ರಲ್ಲಿ ರಾಷ್ಟ್ರಕೂಟರ ದಂತಿದುರ್ಗನು, ಕೀರ್ತಿವರ್ಮನ್ನು ಸೋಲಿಸುವುದರೊಂದಿಗೆ ಈ ಚಾಲುಕ್ಯ ಸಾಮ್ರಾಜ್ಯಕ್ಕೆ ತೆರೆ ಬಿದ್ದಿತು.


ಕಲ್ಯಾಣಿ ಚಾಲುಕ್ಯರು

ರಾಷ್ಟ್ರಕೂಟರ ಕಾಲದಲ್ಲಿ ಹಿಮ್ಮೆಟ್ಟಿದ ಚಾಲುಕ್ಯ ಸಾಮ್ರಾಜ್ಯ, ಚಾಲುಕ್ಯರ ವಂಶಜರಲ್ಲಿ ಒಬ್ಬನಾದ ಎರಡನೇ ತೈಲಪನು,  ಮಾನ್ಯಖೇಡದ ಮೂರನೆಯ ಕೃಷ್ಣನನ್ನು ಪದಚ್ಯುತಮಾಡಿ, ರಾಷ್ಟ್ರಕೂಟರನ್ನು ಸೋಲಿಸಿ ಸುಮಾರು ಕ್ರಿ.ಶ. ೯೭೩ರ ಸಮಯಕ್ಕೆ ಪಟ್ಟಕ್ಕೆ ಬರುತ್ತಾರನೆ. ಚಾಲುಕ್ಯ ರಾಜ್ಯದ ಬಹುತೇಕ ಪ್ರದೇಶಗಳನ್ನು ಮತ್ತೆ ಕೈವಶಮಾಡಿಕೊಳ್ಳುವುದರೊಂದಿಗೆ, ತನ್ನ ವೈಭವವನ್ನು ಮರಳಿ ಪಡೆಯಿತು.  ಇವರು ಮಾನ್ಯಖೇಡವನ್ನು ತಮ್ಮ ಆರಂಭದ ರಾಜಧಾನಿಯಾಗಿ ಮಾಡಿಕೊಂಡು ಆಡಳಿತ ವಿಸ್ತರಿಸುತ್ತಾನೆ. ಇವರಿಗೂ ಚೋಳರಿಗೂ ಪದೇ ಪದೇ ಯುದ್ಧಗಳು ನಡೆಯುತ್ತಿದ್ದವು. ಮೊದಲನೆಯ ಸೋಮೇಶ್ವರ ಎಂಬ ಚಾಲುಕ್ಯ ಅರಸು ರಾಜಾಧಿರಾಜ ಚೋಳ ನನ್ನು ಕ್ರಿ.ಶ. ೧೦೫೨ ರಲ್ಲಿ ಸೋಲಿಸಿದನು. ಚಾಲುಕ್ಯರು ಸೋಮೇಶ್ವರನ ಕಾಲಕ್ಕೆ ತಮ್ಮ ರಾಜಧಾನಿಯನ್ನು ಮಾನ್ಯಖೇಡದಿಂದ ಇಂದಿನ ಕಲ್ಯಾಣಕ್ಕೆ ಸ್ಥಳಾಂತರಿಸುತ್ತಾರೆ. ಚಾಲುಕ್ಯರ ಈ ಶಾಖೆ ಕಲ್ಯಾಣಿಯ ( ಪಶ್ಚಿಮ) ಚಾಲುಕ್ಯರೆಂದು ಹೆಸರಾಯಿತು. ಮುಂದೆ ಸುಮಾರು ೨೫೦ ವರ್ಷ ಆಳಿದ ಈ ರಾಜವಂಶವು , ಚೋಳರೊಂದಿಗೂ , ವೆಂಗಿಯ ಚಾಲುಕ್ಯರೊಂದಿಗೂ ನಿರಂತರ ಹೋರಾಟದಲ್ಲಿ ತೊಡಗಿತ್ತು. ಸತ್ಯಾಶ್ರಯ (ಕ್ರಿ.ಶ. ೯ ೯ ೭-೧೦೦೮), ಒಂದನೆಯ ಸೋಮೇಶ್ವರ (ಕ್ರಿ.ಶ. ೧೦೪೨-೧೦೬ ೮) ಮತ್ತು ಆರನೆಯ ವಿಕ್ರಮಾದಿತ್ಯ (ಕ್ರಿ.ಶ. ೧೦೭೬ – ೧೧೨೬ ) ಈ ವಂಶದ ಕೆಲವು ಪ್ರಸಿದ್ಧ ರಾಜರುಗಳು.

ರನ್ನನಂತಹ ಶ್ರೇಷ್ಠ ಕನ್ನಡ ಕವಿಗಳಿಗೆ ಕಲ್ಯಾಣಿಯ ಚಾಲುಕ್ಯರು ಆಶ್ರಯ ಮತ್ತು ಪ್ರೋತ್ಸಾಹ ಕೊಟ್ಟರು. ರನ್ನನು ಎರಡನೆಯ ತೈಲಪನ ಮತ್ತು ಸತ್ಯಾಶ್ರಯನ ಆಸ್ಥಾನಕವಿಯಾಗಿದ್ದು, ಕಲ್ಯಾಣಿಯ ಚಾಲುಕ್ಯರ ಕಾಲದ ಮೊದಲ ಕವಿ. ಅಜಿತಪುರಾಣಸಾಹಸಭೀಮವಿಜಯ ಅಥವಾ ಗದಾಯುದ್ಧ, ಪರಶುರಾಮಚರಿತ ಮತ್ತು ರನ್ನಕಂದ ಇವನ ಪ್ರಸಿದ್ಧ ಕೃತಿಗಳು.. ಆ ಕಾಲದಲ್ಲಿ ಇನ್ನೂ ಅನೇಕ ಕನ್ನಡ ವಿದ್ವಾಂಸರು ಆಗಿಹೋದರು.

ಕಲ್ಯಾಣಿ ಚಾಲುಕ್ಯರ ರಾಜ ನಾಲ್ಕನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ ವಿದ್ಯಾಪತಿ ಬಿಲ್ಹಣ, ತನ್ನ ಕೃತಿ ವಿಕ್ರಮಾಂಕದೇವ ಚರಿತೆ ರಚಿಸುತ್ತಾನೆ. ಚಾಲುಕ್ಯ ವಂಶದ ಮುಂದಿನ ಪ್ರಸಿದ್ಧ ಅರಸು ಆರನೇ ವಿಕ್ರಮಾದಿತ್ಯ (ಕ್ರಿ.ಶ ೧೦೭೬-೧೧೨೬, ವಿಕ್ರಮಾಂಕ ಎಂದೂ ಹೆಸರು). ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಇವರ ವೈಭವದ ಕಾಲ ಎನ್ನಬಹುದು. ವಿಕ್ರಮ ಶಕೆಯು ಇವರಿಂದಲೇ ಆರಂಭವಾದದ್ದು. ಕಲ್ಯಾಣಿಯ ಚಾಲುಕ್ಯರು ವಾದಿರಾಜ ( ಯಶೋಧರ ಚರಿತಮ್, ಪಾರ್ಶ್ವನಾಥ ಚರಿತಮ್)ರಂತಹ ಸಂಸ್ಕೃತ ವಿದ್ವಾಂಸರಿಗೆ ಪ್ರೋತ್ಸಾಹ ಕೊಟ್ಟರು. ತನಗೆ ಆಶ್ರಯ ಕೊಟ್ಟ ಆರನೆಯ ವಿಕ್ರಮಾದಿತ್ಯನನ್ನು ಬಿಲ್ಹಣನು ವಿಕ್ರಮಾಂಕದೇವ ಚರಿತೆಯ ಮೂಲಕ ಅಜರಾಮರವಾಗಿಸಿದ್ದಾನೆ. ಸುಪ್ರಸಿದ್ಧ ಮಿತಾಕ್ಷರ ಸಂಹಿತೆ ಬರೆದವನು ವಿಜ್ಞಾನೇಶ್ವರ(ಮರತೂರು). ಸ್ವತಃ ಮೂರನೆಯ ಸೋಮೇಶ್ವರನೇ ಕಲೆ ಮತ್ತು ವಿಜ್ಞಾನದ ಬಗೆಗೆ ವಿಶ್ವಕೋಶವನ್ನು ರಚಿಸಿದನು. ಜಗದೇಕಮಲ್ಲನು ಸಂಗೀತಚೂಡಾಮಣಿಯನ್ನು ರಚಿಸಿದನು. ಕಲ್ಯಾಣದ ಚಾಲುಕ್ಯರು ಸುಮಾರು ೨೫೦ ವರುಷಗಳ ಕಾಲ ಆಳ್ವಿಕೆ ಮಾಡುತ್ತಾರೆ. ಇವರ ಪ್ರದೇಶ ತುಂಗಭದ್ರೆಯಿಂದ ನರ್ಮದೆಯ ವರೆಗೆ ವಿಸ್ತರಿಸಿತ್ತು. ದಕ್ಷಿಣದ ಚೋಳರು ಒಮ್ಮೆ ತುಂಗಭದ್ರೆಯ ವರೆಗೆ ತಮ್ಮ ಸಾಮ್ರಾಜ್ಯ ವಿಸ್ತರಿಸಿದ್ದರು.

ಕಲ್ಯಾಣಿಯ ಚಾಲುಕ್ಯರು ಕರ್ನಾಟಕದ ಧಾರವಾಡಗದಗ ಮತ್ತು ಹಾವೇರಿ ಪ್ರದೇಶಗಳಲ್ಲಿ ಐವತ್ತಕ್ಕೂ ಹೆಚ್ಚು ದೇವಾಲಯಗಳನ್ನು ಕಟ್ಟಿದರು.

ವಿಕ್ರಮಾಂಕನ ಮರಣದ ನಂತರ ಚಾಲುಕ್ಯ ಸಾಮ್ರಾಜ್ಯ ಹೆಚ್ಚು ಕಾಲ ನಿಲ್ಲಲಿಲ್ಲ. 

ಹೊಯ್ಸಳರುಕಾಕತೀಯರು ಮತ್ತು ಯಾದವರು ಈ ರಾಜಮನೆತನಗಳ ಉತ್ಕರ್ಷದೊಂದಿಗೆ, ೧೧೮೦ರಲ್ಲಿ, ಕಲ್ಯಾಣಿಯ ಚಾಲುಕ್ಯರ ಸಾಮ್ರಾಜ್ಯವು ಅಸ್ತಂಗತವಾಯಿತು.


ವೆಂಗಿಯ (ಪೂರ್ವ) ಚಾಲುಕ್ಯರು.

ಇಂದಿನ ಆಂಧ್ರ ಪ್ರದೇಶದ ಕರಾವಳಿಯ ಭಾಗವಾಗಿದ್ದ, ವಿಷ್ಣುಕುಂಡಿನ ಸಾಮ್ರಾಜ್ಯದ ಅಳಿದುಳಿದ ಭಾಗಗಳನ್ನು ಸೋಲಿಸಿ, ಇಮ್ಮಡಿ ಪುಲಿಕೇಶಿಯು , ಅಲ್ಲಿಗೆ ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನು ರಾಜಪ್ರತಿನಿಧಿಯಾಗಿ ನೇಮಿಸಿದನು. ಪುಲಿಕೇಶಿಯ ಮರಣದ ನಂತರ, ಈ ಶಾಖೆಯು ಸ್ವತಂತ್ರವಾಗಿ, ಮುಖ್ಯ ವಾತಾಪಿ ಸಾಮ್ರಾಜ್ಯಕ್ಕಿಂತ ಮುಂದೆ, ಅನೇಕ ಪೀಳಿಗೆಗಳವರೆಗೆ ಸ್ವತಂತ್ರ ರಾಜ್ಯಭಾರ ಮಾಡಿತು. ಈ ರಾಜರು ೯ ನೆಯ ಶತಮಾನದ ಮಧ್ಯದವರೆಗೂ, ವೆಂಗಿ ಪ್ರಾಂತ್ಯದಲ್ಲಿ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟರು. ಅಲ್ಲಿಂದ ಮುಂದಿನ ಶಾಸನಗಳಲ್ಲಿ ಕ್ರಮೇಣ ಕನ್ನಡಲಿಪಿಯಲ್ಲಿ ಬರೆದ ತೆಲುಗು ಭಾಷೆ ಕಾಣಬರುತ್ತದೆ.

No comments:

Post a Comment